ಮನಸೇ .....
ಬದುಕು ನಿನಗಾಗಿ,
ಬವಣೆ ನಿನಗಾಗಿ,
ನನ್ನ ಪ್ರೀತಿಯೇ ಸುಳ್ಳಾದರೆ,
ಜಗವೆಲ್ಲ ಸುಳ್ಳು ಅಲ್ಲವೇ... ?
ನಿನ್ನ ಒಂದು ಮಾತು ಸಾಕು,
ಮರುಮಾತು ಇಲ್ಲಿ,
ನಿನ್ನ ಒಂದು ಆಣತಿ ಸಾಕು,
ನಾ ಅಡಿಗಳಲ್ಲಿ..
ನನ್ನ ಪ್ರೀತಿ ಬೊಂಬೆ ನೀನು,
ಮುಡಿ ಸೇರಲೆಂದೆ ...
ಸಮಯದ ಸರಪಳಿಯಲ್ಲಿ,
ಕೈ ಗೊಂಬೆಯಾದೆ.
ನನ್ನ ಬಾಲ ಪುಟಕೆ ನೀನು,
ಹೊಸ ತಿರುವು ತಂದೆ,
ನಿ ಮರೆತು ಹೋದರೆ,
ಈಗ ಬದುಕೇಕೆ ಮುಂದೆ ..
ನಿನ್ನ ಒಂದು ಹೆಸರೇ ಸಾಕು,
ಉಸಿರಾಟಕಿಲ್ಲಿ...
ನಿನ್ನ ಒಂದು ಸ್ಪರ್ಶ ಸಾಕು,
ಈ ಜನುಮದಲ್ಲಿ.
ಮನಸೇ ನಾ ಏನೇ ಮಾಡಿದರೂ
ನಿನ್ನ ಪ್ರೀತಿಗಲ್ಲವೇ....?
ಮನಸೇ ಮನಸಾ ಕ್ಷಮಿಸೆ ......

No comments:
Post a Comment