ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬೀ ತುಳುಕೋ ಈ ಕಂಗಳಲಿ
ಕರಗುತಿದೆ ಕನಸಿನ ಬಣ್ಣ....
ಎದೆಯ ಜೋಪಡಿಯಾ ಒಳಗೆ
ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೆ ಒಲವೇ….
ಜೀವಾ ಕಳೆವಾ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಖಾಯಿಲೆಗೆ
ಪ್ರೀತಿಯೆಂದೆನ್ನ ಬಹುದೇ
ಹೊಂಗನಸಾ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗೆ ಬರಲು
ಕಣ್ಣಾ ಹನಿ ಸುಮ್ಮನೆ ಒಣಗಿ
ಅವಳನ್ನೇ ಜಪಿಸುವುದೇ ಒಲವೇ....
ನಾಲ್ಕು ಪದದಾ ಗೀತೆಯಲಿ
ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ
ಹೃದಯವನು ಹರಿಬಿಡಬಹುದೆ
ಉಕ್ಕಿ ಬರುವ ಕಂಠದಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದಾ ಕವನಾ
ಒಂಟಿತನದ ಗುರುವೇ ಒಲವೇ......

No comments:
Post a Comment