Thursday, December 17, 2009
ಇಂತಿ ನಿನ್ನ ಪ್ರೀತಿಯ ......
ಎಂದು ಎಂದು ಮುಗಿಸದ,
ಯಾವ ಪದಕು ನಿಲುಕದ,
ನಿನಗೆ ಬರೆದು ಕಳಿಸದ,
ಖಾಲಿ ಖಾಲಿ ಕಾಗದ....
ಇಂತಿ ನಿನ್ನ ಪ್ರೀತಿಯ ...... ನಾನ್ಯಾರು ....
ನೆನಪು ತಿವಿದ ಗಾಯದ,
ಮಿಡಿತ ಮಡಿದ ಭಾವದ,
ಕೈಯ ಮುಗಿವ ಮೌನದ,
ಖಾಲಿ ಖಾಲಿ ಕಾಗದ,
ಇಂತಿ ನಿನ್ನ ಪ್ರೀತಿಯ .... ನಾನ್ಯಾರು....
ಎಂದೋ ಬಂದ ಮರಣದ,
ಬದುಕೇ ಇರುವ ಕರ್ಮದ,
ಇದ್ದು ಇರದ ಜೀವದ,
ಖಾಲಿ ಖಾಲಿ ಕಾಗದ,
ಇಂತಿ ನಿನ್ನ ಪ್ರೀತಿಯ.......ನಾನ್ಯಾರು .....
Subscribe to:
Post Comments (Atom)

No comments:
Post a Comment