Monday, January 4, 2010

ನೆನಪು..

ಬಾರದಿರು ಎಂದಾಗ
ಬರುವ ನೀನು
ಬಾ ... ಎಂದಾಗ
ಬರಲೋಲ್ಲೆಯೇಕೆ ....?

ವಿಕ್ರಮನ ಹಿಂದಿರುವ
ಬೇತಾಳನಂತೆ,
ನನ್ನ ಹಿಂದೆ ನೀ ,
ಅಲೆಯುವೆಯೇಕೆ....?

ಬಿಡುವಿರದ ಸಮಯದಲ್ಲಿ,
ಬೆಂಬಿಡದೆ ನೀ,
ಭಾವನೆಗಳ ನೆಪದಲ್ಲಿ
ಬಂದೆನ್ನ ಕುಟುಕುವೆಯೇಕೆ..?

ಬಂದು ಹೋದರೂ ಸರಿಯೇ
ಅದರೆಡೆಯಲಿ ಪ್ರಶ್ನೆಗಳ
ಮಳೆಯ ಸುರಿಸುವೆಯೇಕೆ ...?

ಏಕೆ ನೆನಪೇ ಹೀಗೇಕೆ
ನಿತ್ಯ ಬಂದೆನ್ನ ಮಾನವ
ಕಲಕುತಿರುವೆ...??

No comments:

Post a Comment